• ಜಾನುವಾರು ಸಾಗಾಟ ಮಾಡುವ ವಾಹನ ಮಾಲಕರು Karnataka Prevention of Slaughter and Preservation of Cattle (Transportation of Cattle) Rules 2021 ರನ್ವಯ ಸಾಗಾಣಿಕೆಗೆ ಬೇಕಾದ ಪರವಾನಿಗೆಯನ್ನು ತಮ್ಮ ಸ್ಥಳದಿಂದಲೇ ವೆಬ್ ಸೈಟ್ ತಂತ್ರಜ್ಞಾನ ಸಹಾಯದಿಂದ ಪಡೆದುಕೊಳ್ಳಲು ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
• ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (KEONICS) ಅಭಿವೃದ್ಧಿಪಡಿಸಿದ ಮತ್ತು ನಿರ್ವಹಿಸುವ ವೆಬ್ ಅಪ್ಲಿಕೇಶನ್ ಮತ್ತು ಅನ್ವಯಿಕ ಶುಲ್ಕಗಳನ್ನು KEONICS ಗೆ ಇತ್ಯರ್ಥಪಡಿಸಲಾಗುತ್ತದೆ.
1. https://animaltrans.karahvs.in ವೆಬ್ ಸೈಟ್ ನಲ್ಲಿ ಜಾನುವಾರು ಸಾಗಣೆಗೆದಾರರು ಅರ್ಜಿ ಸಲ್ಲಿಸಲು "ಜಾನುವಾರು ಸಾಗಣೆ ಪರವಾನಿಗೆ" ಆಯ್ಕೆ ಮಾಡಬೇಕು (ಅರ್ಜಿ ಸಲ್ಲಿಸುವಾಗ ಜಾನುವಾರು/ಗಳ ಫೋಟೋ , ಜಾನುವಾರು ಮಾಲಕರ ಭಾವಚಿತ್ರ ಇರುವ ಯಾವುದಾದರೊಂದು ಗುರುತಿನ ಚೀಟಿ, ಜಾನುವಾರುಗಳ ಕಿವಿಯೋಲೆ ಸಂಖ್ಯೆ, ಸಾಗಾಟ ಮಾಡಲು ಬಳಸುವ ವಾಹನದ ಫೋಟೋ, ವಾಹನದ ಆರ್. ಸಿ ಪ್ರತಿ ಮೊಬೈಲ್ /ಕಂಪ್ಯೂಟರ್ ನಲ್ಲಿ ಸಿದ್ದವಾಗಿ ಇಟ್ಟುಕೊಳ್ಳಿ)
2. ಅರ್ಜಿದಾರರ ಮೊಬೈಲ್ ಸಂಖ್ಯೆ ನಮೂದಿಸಿ , OTP ನಮೂದಿಸಿ ಅರ್ಜಿಯಲ್ಲಿ ಕೇಳಲಾದ ಸಾಗಾಟದ ಉದ್ದೇಶ,ಸಾಗಾಟ ವಾಹನದ ಮಾಹಿತಿ,ಜಾನುವಾರು ಮಾಲೀಕರ ವಿವರ,ಜಾನುವಾರು ವಿವರ, ಸಾಗಾಟ ಮಾರ್ಗ, ತಲುಪುವ ಸ್ಥಳ ಹಾಗೂ ವ್ಯಕ್ತಿಯ ಹೆಸರು ಮತ್ತು ವಿಳಾಸ ವನ್ನು ನಮೂದಿಸಬೇಕು. ( ಅರ್ಜಿ ಸಲ್ಲಿಸುವಾಗ ನಿಮ್ಮ ವಾಹನ ಸಂಖ್ಯೆ ಆಯ್ಕೆ ಪಟ್ಟಿಯಲ್ಲಿ ಇಲ್ಲವಾದಲ್ಲಿ ಒಂದು ಬಾರಿ ವಾಹನದ ವಿವರ , ಆರ್.ಸಿ ಪ್ರತಿ ಮತ್ತು ವಾಹನದ ಫೋಟೋ ವನ್ನು ಸೇರಿಸಿ).
3. ಅರ್ಜಿ ಸಲ್ಲಿಸಿದಾಗ ಸಾಗಾಟ ವಾಹನವು ತಲುಪುವ ಸ್ಥಳವು 15 ಕಿಲೋ ಮೀಟರ್ ಗಿಂತ ಕಡಿಮೆ ಇದ್ದಲ್ಲಿ ಯಾವುದೇ ಶುಲ್ಕವು ಅನ್ವಯಿಸುವುದಿಲ್ಲ . 15 ಕಿ. ಲೋ ಮೀಟರ್ ಗಿಂದ ಹೆಚ್ಚು ಇದ್ದಲ್ಲಿ ಲಘು ವಾಹನಕ್ಕೆ ರೂಪಾಯಿ 25.00 ಮತ್ತು ಘನ ವಾಹನಕ್ಕೆ ರೂಪಾಯಿ 50.00 ಹಾಗೂ ಸದರಿ ಸೇವಾ ಶುಲ್ಕಕ್ಕೆ ತಗಲುವ ಜಿ. ಎಸ್. ಟಿ ಸೇರಿಸಿ ಒಟ್ಟು ಮೊತ್ತವನ್ನು ಆನ್ ಲೈನ್ ಪೇಮೆಂಟ್ ಮೂಲಕ ಪಾವತಿ ಮಾಡಬಹುದಾಗಿದೆ. (UPI, Credit, Debit Card, net banking ವಿಧಾನ ಲಭ್ಯವಿದೆ).
4. ಶುಲ್ಕ ಪಾವತಿಯಾದ ನಂತರ ಪ್ರದೇಶದ ಪಶುವೈದ್ಯಾಧಿಕಾರಿ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರವನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು ಹಾಗೂ ವ್ಯಾಪ್ತಿ ಪ್ರದೇಶದ ಪಶುವೈದ್ಯಾಧಿಕಾರಿಯ ಮೊಬೈಲ್ ಸಂಖ್ಯೆಗೆ ಕೂಡ ಅರ್ಜಿ ಸಲ್ಲಿಕೆಯ ಬಗ್ಗೆ (SMS) ಸಂದೇಶ ರವಾನಿಸಲಾಗುವುದು.
5. ಜಾನುವಾರು ಇರುವ ವ್ಯಾಪ್ತಿ ಪ್ರದೇಶದ ಪಶುವೈದ್ಯಾಧಿಕಾರಿಗಳು ಜಾನುವಾರು/ಗಳ ತಪಾಸಣೆ ನಡೆಸಿ ಸಾಗಾಟ ಮಾಡಲು ತಂತ್ರಾಂಶದ ಮೂಲಕ ಅನುಮತಿ ಅಥವಾ ನಿರಾಕರಣೆ ಸೂಚಿಸುತ್ತಾರೆ.
6. ಪರವಾನಿಗೆಗಾಗಿ ಸಲ್ಲಿಸಿದ ಅರ್ಜಿಗಳ ಅನುಮೋದನೆ ಅಥವಾ ನಿರಾಕರಣೆ ಬಗ್ಗೆ ಅರ್ಜಿದಾರರ ಮೊಬೈಲ್ ಸಂಖ್ಯೆಗೆ (SMS) ಮುಖಾಂತರ ಸಂದೇಶ ರವಾನಿಸಲಾಗುವುದು.
7. ಮೊಬೈಲ್ ಸಂದೇಶದಲ್ಲಿ ಬಂದಿರುವ ಅನುಮೋದಿತ ಪರವಾನಿಗೆಯನ್ನು ಅಲ್ಲೇ ಡೌನ್ ಲೋಡ್ ಮಾಡಿ ಕೊಳ್ಳಬಹುದು ಮತ್ತು ಪ್ರಿಂಟ್ ಕೂಡ ಮಾಡಿಸಿಕೊಳ್ಳಬಹುದು
8. ಅರ್ಜಿಯನ್ನು ಪಶುವೈದ್ಯಾಧಿಕಾರಿಗಳು ಕಾರಣ ನೀಡಿ ನಿರಾಕರಿಸಿದಲ್ಲಿ ಅರ್ಜಿದಾರರು ಪುನಃ ಅರ್ಜಿಯನ್ನು ಸರಿ ಪಡಿಸಿಕೊಂಡು ಮರು ಅರ್ಜಿ ಸಲ್ಲಿಸಬಹುದಾಗಿದೆ.
1. ಅರ್ಜಿದಾರರು ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ತಿಳಿಯಲು https://animaltrans.karahvs.in ವೆಬ್ ಸೈಟ್ ನಲ್ಲಿ "ನಿಮ್ಮ ಅಪ್ಲಿಕೇಶನ್ ಟ್ರ್ಯಾಕ್ ಮಾಡಿ ಮತ್ತು ಪರವಾನಿಗೆ ಯನ್ನು ಡೌನ್ಲೋಡ್ ಮಾಡಿ" ಆಯ್ಕೆ ಮಾಡಬೇಕು.
2 . ಅರ್ಜಿದಾರರು ಅರ್ಜಿ ಸಲ್ಲಿಸಲು ಬಳಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ , ಒಟಿಪಿ ನಮೂದಿಸಬೇಕು. ಆಗ ಡ್ಯಾಶ್ ಬೋಡ್ ತೆರೆದು ಕೊಳ್ಳುತ್ತದೆ. ಮತ್ತು ಸಲ್ಲಿದ ಅರ್ಜಿಗಳು, ಅನುಮೋದಿತ ಪರವಾನಿಗೆ ಗಳು , ನಿರಾಕರಿಸಿದ ಅರ್ಜಿಗಳು ಎಂಬ ಮೂರು ಆಯ್ಕೆಗಳು ಇರುತ್ತವೆ.
3. ಅರ್ಜಿಯು ಅನುಮೋದನೆಗೊಂಡಿದ್ದಲ್ಲಿ ಡೌನ್ಲೋಡ್ ಪರವಾನಿಗೆ ಆಯ್ಕೆ ಮಾಡಿ ಕೊಳ್ಳಬಹುದು. ಅರ್ಜಿಯು ನಿರಾಕರಣೆಗೊಂಡಿದ್ದಲ್ಲಿ ಅರ್ಜಿ ತಿದ್ದಿ ಆಯ್ಕೆ ಮಾಡಿ ನಿರಾಕರಣೆ ಕಾರಣ ತಿಳಿದು ಮರು ಸಲ್ಲಿಸಲು ಅವಕಾಶ ಇರುತ್ತದೆ.
https://animaltrans.karahvs.in ವೆಬ್ ಸೈಟ್ ನಲ್ಲಿ ಅಧಿಕಾರಿಗಳು / ಸಾರ್ವಜನಿಕರು ಪರವಾನಿಗೆ ವೀಕ್ಷಿಸಲು ಆಯ್ಕೆ ಮಾಡಿ , ವಾಹನ ಸಂಖ್ಯೆ ಹುಡುಕಿ ಆಯ್ಕೆ ಮಾಡಬೇಕು.ಸದರಿ ವಾಹನವು ಇ-ಪರವಾನಿಗೆ ಹೊಂದಿರುವ ಬಗ್ಗೆ ಪರಿಶೀಲಿಸಬಹುದಾಗಿದೆ ಹಾಗೂ ಕ್ಯೂ ಆರ್ ಕೋಡ್ (QR CODE) ಹೊಂದಿರುವ ಪರವಾನಿಗೆಯನ್ನು ವೀಕ್ಷಿಸಬಹುದಾಗಿದೆ.
ಜಾನುವಾರುಗಳನ್ನು ಕಾನೂನುಬದ್ಧವಾಗಿ ಸಾಗಿಸಲು ಆನ್‌ಲೈನ್ ಇ-ಪರ್ಮಿಟ್. ಇಂಟಿಗ್ರೇಟೆಡ್ ಕ್ಲೌಡ್ ಆಧಾರಿತ ಆನ್‌ಲೈನ್ ವ್ಯವಸ್ಥೆ.