• ಜಾನುವಾರು ಸಾಗಾಟ ಮಾಡುವ ವಾಹನ ಮಾಲಕರು Karnataka Prevention of Slaughter and Preservation of Cattle (Transportation of Cattle) Rules 2021 ರನ್ವಯ ಸಾಗಾಣಿಕೆಗೆ ಬೇಕಾದ ಪರವಾನಿಗೆಯನ್ನು ತಮ್ಮ ಸ್ಥಳದಿಂದಲೇ ವೆಬ್ ಸೈಟ್ ತಂತ್ರಜ್ಞಾನ ಸಹಾಯದಿಂದ ಪಡೆದುಕೊಳ್ಳಲು ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
1.https://animaltrans.karahvs.in ವೆಬ್ ಸೈಟ್ ನಲ್ಲಿ ಜಾನುವಾರು ಸಾಗಣೆಗೆದಾರರು ಅರ್ಜಿ ಸಲ್ಲಿಸಲು "ಜಾನುವಾರು ಸಾಗಣೆ ಪರವಾನಿಗೆ" ಆಯ್ಕೆ ಮಾಡಬೇಕು (ಅರ್ಜಿ ಸಲ್ಲಿಸುವಾಗ ಜಾನುವಾರು/ಗಳ ಫೋಟೋ , ಜಾನುವಾರು ಮಾಲಕರ ಭಾವಚಿತ್ರ ಇರುವ ಯಾವುದಾದರೊಂದು ಗುರುತಿನ ಚೀಟಿ, ಜಾನುವಾರುಗಳ ಕಿವಿಯೋಲೆ ಸಂಖ್ಯೆ, ಸಾಗಾಟ ಮಾಡಲು ಬಳಸುವ ವಾಹನದ ಫೋಟೋ, ವಾಹನದ ಆರ್. ಸಿ ಪ್ರತಿ ಮೊಬೈಲ್ /ಕಂಪ್ಯೂಟರ್ ನಲ್ಲಿ ಸಿದ್ದವಾಗಿ ಇಟ್ಟುಕೊಳ್ಳಿ)
2. ಅರ್ಜಿದಾರರ ಮೊಬೈಲ್ ಸಂಖ್ಯೆ ನಮೂದಿಸಿ , OTP ನಮೂದಿಸಿ ಅರ್ಜಿಯಲ್ಲಿ ಕೇಳಲಾದ ಸಾಗಾಟದ ಉದ್ದೇಶ,ಸಾಗಾಟ ವಾಹನದ ಮಾಹಿತಿ,ಜಾನುವಾರು ಮಾಲೀಕರ ವಿವರ,ಜಾನುವಾರು ವಿವರ, ಸಾಗಾಟ ಮಾರ್ಗ, ತಲುಪುವ ಸ್ಥಳ ಹಾಗೂ ವ್ಯಕ್ತಿಯ ಹೆಸರು ಮತ್ತು ವಿಳಾಸ ವನ್ನು ನಮೂದಿಸಬೇಕು. ( ಅರ್ಜಿ ಸಲ್ಲಿಸುವಾಗ ನಿಮ್ಮ ವಾಹನ ಸಂಖ್ಯೆ ಆಯ್ಕೆ ಪಟ್ಟಿಯಲ್ಲಿ ಇಲ್ಲವಾದಲ್ಲಿ ಒಂದು ಬಾರಿ ವಾಹನದ ವಿವರ , ಆರ್.ಸಿ ಪ್ರತಿ ಮತ್ತು ವಾಹನದ ಫೋಟೋ ವನ್ನು ಸೇರಿಸಿ). ಹೆಚ್ಚಿನ ವಿವರ
ಜಾನುವಾರುಗಳನ್ನು ಕಾನೂನುಬದ್ಧವಾಗಿ ಸಾಗಿಸಲು ಆನ್‌ಲೈನ್ ಇ-ಪರ್ಮಿಟ್. ಇಂಟಿಗ್ರೇಟೆಡ್ ಕ್ಲೌಡ್ ಆಧಾರಿತ ಆನ್‌ಲೈನ್ ವ್ಯವಸ್ಥೆ.